ಉತ್ತರ ಖಗೋಳಾಕಾಶದ ನಕ್ಷತ್ರ ಪುಂಜಗಳ ಪೈಕಿ ಒಂದು. ಬಲು ಸ್ವಾರಸ್ಯದಿಂದ ಕೂಡಿರುವಂಥದ್ದು. ಸನ್ನಿಹಿತ ಸ್ಥಾನ: ವಿಷುವದಂಶ 19 ಗಂ°; ಘಂಟಾವೃತ್ತಾಂಶ 40° ಉತ್ತರ. ಅತ್ಯುಜ್ಜ್ವಲ ನೀಲಿ ಬಣ್ಣದ ನಕ್ಷತ್ರ ಅಭಿಜಿತ್ (ವೇಗ), ಆದಿಮಪ್ರರೂಪದ ಗ್ರಹಣಕಾರಕ ಯಮಳ ನಕ್ಷತ್ರ ಬೀಟ ಲೈರ್, ಚತುರ್ವಳಿ ಎಪ್‍ಸೈಲಾನ್ ಲೈರ್ ಮತ್ತು ಉಂಗುರ ನೀಹಾರಿಕೆ (M.57) ಇವನ್ನೆಲ್ಲ ಈ ಪುಂಜ ಒಳಗೊಂಡಿದೆ. ಅಭಿಜಿತ್ ನಕ್ಷತ್ರ AO ರೋಹಿತಪ್ರರೂಪದ್ದು. ಸೂರ್ಯನಿಂದ 26.5 ಬೆಳಕುವರ್ಷಗಳ ದೂರದಲ್ಲಿದೆ. ಈ ಪುಂಜದಲ್ಲಿ ಕೆಲವು ನಕ್ಷತ್ರಗುಚ್ಛಗಳೂ ನೀಹಾರಿಕೆಗಳೂ ಇವೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ